ಗೋಕಾಕ್: ಭಾರಿ ಮಳೆಗೆ ತುಂಬಿ ಹರಿದ ಹಳ್ಳ ದಾಟಲು ಜೆಸಿಬಿ ಏರಿದ ಶಾಲೆ ಮಕ್ಕಳು

ಕರ್ನಾಟಕದಾದ್ಯಂತ ಅನೇಕ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಬೆಳಗಾವಿಯಲ್ಲಿಯೂ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಇದೀಗ ಗೋಕಾಕ್ ತಾಲೂಕಿನ ಗ್ರಾಮವೊಂದರಲ್ಲಿ ಹಳ್ಳ ಉಕ್ಕಿಹರಿದಿದ್ದು, ಶಾಲೆ ಮಕ್ಕಳು ಹಳ್ಳ ದಾಟಿ ಶಾಲೆಗೆ ತೆರಳಲು ಜೆಸಿಬಿಯನ್ನು ಆಶ್ರಯಿಸಬೇಕಾಗಿ ಬಂದಿದೆ.