ಮೈಕ್ರೋಸಾಫ್ಟ್​ನ ‘ಕ್ಲೌಡ್​’ಸರ್ವಿಸ್ ಸಮಸ್ಯೆ: ಬೆಂಗಳೂರಿನಿಂದ ತೆರಳಬೇಕಿದ್ದ 21 ಇಂಡಿಗೋ ವಿಮಾನಗಳು ರದ್ದು

ಮೈಕ್ರೋಸಾಫ್ಟ್​ನ ಕ್ಲೌಡ್​ ಸರ್ವಿಸ್​ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಿಂದ ವಿವಿಧೆಡೆಗೆ ತೆರಳಬೇಕಿದ್ದ 21 ಇಂಡಿಗೋ ವಿಮಾನಗನ್ನು ರದ್ದು ಮಾಡಲಾಗಿದೆ. ಹೀಗಾಗಿ ಬೇರೆ ಬೇರೆ ಕಡೆಗಳಿಗೆ ತೆರಳಲಾಗದೆ ಪ್ರಯಾಣಿಕರು ಪರದಾಡಿದ್ದಾರೆ. ಏರ್‌ಲೈನ್ಸ್‌ ಸಿಬ್ಬಂದಿ ಸೇರಿ ಯಾರೊಬ್ಬರೂ ಸ್ಪಂದಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.