ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಕ್ರಿಕೆಟ್ ಕದನವೇ ನಡೆಯಲಿದೆ. ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳ ನಡುವೆ ಹೈವೋಲ್ಟೇಜ್ ಕಾಳಗ ನಡೆಯಲಿದೆ. ಐಪಿಎಲ್ 16ನೇ ಆವೃತ್ತಿಯಲ್ಲಿ, ಪ್ಲೇಆಫ್ ತಲುಪಲು ನಡೆಯಲಿರುವ ಮಹಾಹೋರಾಟ ನೋಡಲು, ಕೋಟ್ಯಂತರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಕ್ರೀಡಾಂಗಣದ ಹೊರಗಡೆ ‘ಈ ಸಲ ಕಪ್ಪು ಲಾಲಿಪಾಪ್ಪು’ ಎಂದು ಸಿಎಸ್ಕೆ ಅಭಿಮಾನಿಗಳು ಕೇಕೆ ಹಾಕಿದ್ದಾರೆ.