ವಿಜಯಪುರ: ಶಾಲಾ ಕಾಲೇಜಗಳಿಗೆ ತೆರಳಲು ಸೂಕ್ತ ಬಸ್ ವ್ಯವಸ್ಥೆಗಾಗಿ ಆಗ್ರಹಿಸಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬಸ್ ತಡೆದು ಹೋರಾಟ ನಡೆಸಿದ್ದಾರೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕಿರಸ್ಯಾಳ ಗ್ರಾಮದ ಬಳಿ ಕಿರಶ್ಯಾಳ, ಹೆಬ್ಬಾಳ, ಬಿದ್ನಾಳ, ಹಾಲ್ಯಾಳ ಗ್ರಾಮಗಳ ವಿದ್ಯಾರ್ಥಿಗಳು ಬಸ್ ಗಳ ತಡೆದು ಪ್ರತಿಭಟಿಸಿದರು. ಬಸವನಬಾಗೇವಾಡಿ ಪಟ್ಟಣದಿಂದ ನಿಡಗುಂದಿ ಪಟ್ಟಣಕ್ಕೆ ತೆರಳೋ ಮಾರ್ಗದಲ್ಲಿ ಬಸ್ ಗಳ ಸಮಸ್ಯೆ ಎದುರಾಗಿದೆ.