ಸಿಎಂ ಸಿದ್ದರಾಮಯ್ಯ ದಶಕಗಳಿಂದಲೂ ರಾಜಕೀಯದಲ್ಲಿದ್ದಾರೆ. ಹಲವು ಬೇರೆ ಬೇರೆ ರಂಗದ ಸೆಲೆಬ್ರಿಟಿಗಳು, ಮುಖಂಡರು ಸಿದ್ದರಾಮಯ್ಯ ಅವರಿಗೆ ಬಹಳ ಆಪ್ತರು. ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಅವರು, ಕನ್ನಡ ಚಿತ್ರರಂಗದ ನಟಿಯೊಬ್ಬರು ತಮ್ಮನ್ನು ‘ಹೀರೋ’ ಎಂದು ಕರೆಯುತ್ತಿದ್ದ ವಿಷಯ ಹಂಚಿಕೊಂಡಿದ್ದಾರೆ.