ಟೀಂ ಇಂಡಿಯಾದ ಮುಂದೆ ಅಲ್ಲಾಹು ಅಕ್ಬರ್ ಘೋಷಣೆ

ತಂಡದ ಗೆಲುವು ಖಚಿತವಾದ ಬಳಿಕ ತಂಡವನ್ನು ಪ್ರೋತ್ಸಾಹಿಸಲು ಮೈದಾನಕ್ಕೆ ಬಂದಿದ್ದ ಬಾಂಗ್ಲಾದೇಶ ಅಭಿಮಾನಿಗಳು ಅಲ್ಲಾಹು ಅಕ್ಬರ್ ಎಂದು ಕೂಗಲಾರಂಭಿಸಿದರು. ಈ ವೇಳೆ ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಬಾಂಗ್ಲಾದೇಶ ತಂಡದ ನಾಯಕ ಅಜೀಜುಲ್ ಹಕೀಮ್ ತಮೀಮ್ ಅಲ್ಲಾಹು ಅಕ್ಬರ್ ಘೋಷಣೆಗಳನ್ನು ಜೋರಾಗಿ ಕೂಗುವಂತೆ ಅಭಿಮಾನಿಗಳ ಬಳಿ ಕೇಳಿಕೊಂಡರು.