ಯಡಿಯೂರಪ್ಪನವರು ಮಾಧ್ಯಮಗಳ ಜೊತೆ ಮಾತಾಡುವಾಗ ಕೆಮ್ಮು ಅವರನ್ನು ಪದೇಪದೆ ಬಾಧಿಸಿತು. ಬಿಜೆಪಿ ನಾಯಕರು ಬೆಲೆಯೇರಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಬದಲು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕೆಂದು ಕಾಂಗ್ರೆಸ್ ನಾಯಕರರು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸದೆ ವಿಜಯೇಂದ್ರ ಅವರಿಗೆ ಮಾತಾಡುವಂತೆ ಹೇಳಿದರು.