ರೋಹಿತ್ ವಿರುದ್ಧ ಮೊದಲ ಓವರ್ ಎಸೆಯುವ ಜವಬ್ದಾರಿಯನ್ನು ಸಿರಾಜ್ ತೆಗೆದುಕೊಂಡಿದ್ದರು. ಅದರಂತೆ ಈ ಓವರ್ನ 2ನೇ ಮತ್ತು 3ನೇ ಎಸೆತವನ್ನು ಬೌಂಡರಿಗಟ್ಟಿದ ರೋಹಿತ್, ನಂತರದ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಸಿರಾಜ್, ಚಾಂಪಿಯನ್ಸ್ ಟ್ರೋಫಿಯನ್ನು ತನ್ನನ್ನು ತಂಡದಿಂದ ಕೈಬಿಟ್ಟಿದ ನಾಯಕ ರೋಹಿತ್ ಶರ್ಮಾರನ್ನು ಮೊದಲ ಓವರ್ನಲ್ಲೇ ಪೆವಿಲಿಯನ್ಗಟ್ಟುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.