ಗೃಹ ಸಚಿವರ ನಿವಾಸಕ್ಕೆ ಆಗಮಿಸಿರುವ ಎಡಿಜಿಪಿ ಆರ್ ಹಿತೇಂದ್ರ

ಹೇಳಿಕೆಯೊಂದನ್ನು ನೀಡಿರುವ ಪರಮೇಶ್ವರ್, ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಆದರೆ ಸರಿಯಾದ ಮಾಹಿತಿ ಲಭ್ಯವವಾಗುತ್ತಿಲ್ಲ, ಭಿನ್ನ ಹೇಳಿಕೆಗಳು ವ್ಯಕ್ತವಾಗಿವೆ, ಆದರೆ ಈಗಾಗಲೇ ಒಂದು ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ ಮತ್ತು ಬಿಜೆಪಿ ನಾಯಕರು ನೀಡಿರುವ ದೂರನ್ನು ಅದಕ್ಕೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ. ಅಧಿಕೃತವಾಗಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು ಸೆರೆಯಾಗಿರುವ ದೃಶ್ಯವನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ.