ಬಿಗ್ ಬಾಸ್ ಮನೆಯೊಳಗೆ ಕಾಲಿಡುವುದಕ್ಕೂ ಮುನ್ನ ಡ್ರೋನ್ ಪ್ರತಾಪ್ ಅವರ ಬಗ್ಗೆ ಜನರಿಗೆ ಬೇರೆಯದೇ ಭಾವನೆ ಇತ್ತು. ಆದರೆ ದೊಡ್ಮನೆಯಲ್ಲಿ ಅವರು ನಡೆದುಕೊಳ್ಳುತ್ತಿರುವ ರೀತಿ ನೋಡಿದ ಬಳಿಕ ಎಲ್ಲರಿಗೂ ಅಭಿಪ್ರಾಯ ಬದಲಾಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮೊದಲ ವಾರದಲ್ಲಿ ಅಳುಮುಂಚಿ ಆಗಿದ್ದ ಪ್ರತಾಪ್ ಅವರು ನಂತರದ ದಿನಗಳಲ್ಲಿ ಸಖತ್ ಆ್ಯಕ್ಟೀವ್ ಆದರು. ಮಾತಿನ ನಡುನಡುವೆ ಅವರು ಗಾದೆ ಮಾತುಗಳನ್ನು ಬಳಸುತ್ತಾರೆ. ‘ಮೂರು ಹೆತ್ತವಳು ಆರು ಹೆತ್ತವಳಿಗೆ ಹೇಳೋಕೆ ಬಂದಳಂತೆ’ ಎಂದು ಡ್ರೋನ್ ಪ್ರತಾಪ್ ಹೇಳಿದಾಗ ಕಾರ್ತಿಕ್ ಮಹೇಶ್ಗೆ ಅರ್ಥ ಆಗಲಿಲ್ಲ. ಆ ಗಾದೆಯನ್ನು ಸಂದರ್ಭ ಸಹಿತವಾಗಿ ವಿವರಿಸಲು ಡ್ರೋನ್ ಪ್ರತಾಪ್ ಮುಂದಾದಾಗ ಕಾರ್ತಿಕ್ ಕಕ್ಕಾಬಿಕ್ಕಿ ಆದರು. ಆ ಕ್ಷಣದ ವಿಡಿಯೋ ಇಲ್ಲಿದೆ. ಪ್ರತಿ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ಲೈವ್ ವೀಕ್ಷಣೆಗೆ ಅವಕಾಶ ಇದೆ.