‘ದೇವರ’ ಸಿನಿಮಾವನ್ನು ಜೂ ಎನ್ಟಿಆರ್ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಆದರೆ ಸಿನಿಮಾ ಬಿಡುಗಡೆ ದಿನ ಆಂಧ್ರ-ತೆಲಂಗಾಣದ ಕೆಲ ಚಿತ್ರಮಂದಿರಗಳಲ್ಲಿ ಫ್ಯಾನ್ಸ್ ಗಲಾಟೆಯನ್ನೂ ಮಾಡಿದ್ದಾರೆ. ಹೈದರಾಬಾದ್ನ ಸುದರ್ಶನ್ ಚಿತ್ರಮಂದಿರದ ಬಳಿ ನಿಲ್ಲಿಸಲಾಗಿದ್ದ ಜೂ ಎನ್ಟಿಆರ್ ಕಟೌಟ್ಗೆ ಬೆಂಕಿ ತಗುಲಿದೆ.