ಬಿಗ್ ಬಾಸ್ ಆಟದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳು ಕೂಡ ಅಲ್ಲ. ಪರಿಸ್ಥಿತಿಗೆ ತಕ್ಕಂತೆ ಎಲ್ಲರೂ ಬದಲಾಗುತ್ತಾರೆ. ಕಷ್ಟದ ಸಂದರ್ಭದಲ್ಲಿ ಯಾರಿಂದಲಾದರೂ ಸಹಾಯ ಸಿಗುತ್ತೆ ಎಂದು ನಿರೀಕ್ಷಿಸುವುದು ಕೂಡ ಕಷ್ಟ. ಆ ಸತ್ಯ ಈಗ ವಿನಯ್ ಗೌಡ ಅವರಿಗೆ ಅರ್ಥ ಆಗಿದೆ. ಅದನ್ನು ಅವರು ನೇರವಾಗಿಯೇ ಹೇಳಿದ್ದಾರೆ. 8ನೇ ವಾರದಲ್ಲಿ ಕ್ಯಾಪ್ಟನ್ ಆಗಲು ಅರ್ಹರಲ್ಲದವರ ಹೆಸರನ್ನು ಹೇಳುವಂತೆ ನಮ್ರತಾಗೆ ಬಿಗ್ ಬಾಸ್ ಕಡೆಯಿಂದ ಆದೇಶ ಬಂತು. ಆಗ ಅವರು ವಿನಯ್ ಗೌಡ ಹೆಸರನ್ನು ಹೇಳಿದರು. ಇದರಿಂದ ವಿನಯ್ಗೆ ಶಾಕ್ ಆಯಿತು. ‘ವಿನಯ್ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇಡುತ್ತೇನೆ. ಕೋಪದಲ್ಲಿ ಅವರು ಅಗ್ರೆಸಿವ್ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಾತನಾಡುವಾಗ ಬೇರೆಯವರಿಗೆ ನೋವಾಗುತ್ತದೆ ಎಂಬುದನ್ನು ಕೂಡ ಅವರು ಯೋಚಿಸುವುದಿಲ್ಲ’ ಎಂದು ನಮ್ರತಾ ಕಾರಣ ನೀಡಿದರು. ಇದನ್ನು ಕೇಳಿ ವಿನಯ್ಗೆ ಬೇಸರ ಆಯಿತು. ಈ ಸಂಚಿಕೆ ನವೆಂಬರ್ 30ರ ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ದಲ್ಲಿ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ ನೋಡಬಹುದು.