ಮಾಲೀಕನಿಗಾಗಿ ಕಾದು ಕಾದು ಸುಸ್ತಾದ ಸಾಕು ನಾಯಿ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿದು ಬಿದ್ದ ಭೀಕರ ದೃಶ್ಯ ಜನರ ಮನಕಲಕುವಂತಿದೆ. ಈವರೆಗೆ ನಾಲ್ವರ ಶವ ಪತ್ತೆ ಆಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಮಧ್ಯೆ, ಮಣ್ಣಿನಡಿ ಸಿಲುಕಿದ್ದ ಮಾಲೀಕ ಮತ್ತೆ ಬರುವನೇ ಎಂದು ಸಾಕು ನಾಯಿಯೊಂದು ಕಾದು ಕುಳಿತ ದೃಶ್ಯ ಕಲ್ಲೆದೆಯನ್ನೂ ಕರಗಿಸುವಂತಿದೆ.