ನಟ ದರ್ಶನ್ ಹಾಗೂ ವಿನೋದ್ ಪ್ರಭಾಕರ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಇಬ್ಬರೂ ಒಟ್ಟಾಗಿ ಸಿನಿಮಾ ಮಾಡಿದ್ದಾರೆ. ಈಗ ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಅಕ್ಟೋಬರ್ 6ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಇದಕ್ಕೆ ದರ್ಶನ್ ವಿಶ್ ಮಾಡಿದ್ದಾರೆ. ವಿನೋದ್ ಜೊತೆ ಕುಳಿತು ಅವರು ವಿಡಿಯೋ ಮಾಡಿದ್ದಾರೆ. ‘ಪ್ರಭಾಕರ್ಗೆ ನೀವು ಸಾಕಷ್ಟು ಪ್ರೀತಿ ನೀಡಿದ್ರಿ. ಅದೇ ರೀತಿಯ ಪ್ರೀತಿ, ಪ್ರೋತ್ಸಾಹವನ್ನು ಮರಿ ಟೈಗರ್ಗೂ ನೀಡಿ. ಅವರ ನಟನೆಯ ಫೈಟರ್ ವೀಕ್ಷಿಸಿ, ಪ್ರೋತ್ಸಾಹಿಸಿ’ ಎಂದು ದರ್ಶನ್ ಕೋರಿದ್ದಾರೆ.