ಭಾರಿ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸೋಮೇಶ್ವರ ಬೀಚ್ ಬಳಿ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ನಿರಂತರ ಮಳೆ ಮುಂದುವರೆದು ಗುಡ್ಡ ಸಂಪೂರ್ಣ ಕುಸಿದರೆ ಬೈಂದೂರು ಪ್ರಸಿದ್ಧ ಪ್ರವಾಸಿತಾಣ ಕಣ್ಮರೆ ಆಗುವ ಸಾಧ್ಯತೆ ಇದೆ. ಈಗಾಗಲೇ ಸುಮಾರು 30 ಮನೆಗಳ ಸಂಪರ್ಕ ಕಡಿತವಾಗಿದೆ.