ಅಲ್ಲಿನ ಕಾಲೇಜ್ನಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.. ಓಣಂ ನಿಮಿತ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಪ್ರದಾಯ ಉಡುಗೆ ತೊಟ್ಟು ಮಿರ ಮಿರ ಮಿಂಚಿದ್ದಾರೆ.. ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.. ಮಸ್ತ್ ಮಸ್ತ್ ಡ್ಯಾನ್ಸ್.. ಸೀರೆಯಲ್ಲಿ ಸಖತ್ ಮಿಂಚಿಂಗ್.. ನಾವೇನ್ ಕಮ್ಮಿ ಅಂತ ಪಂಚೆ ತೊಟ್ಟು ಬಂದ ಪಡ್ಡೆ ಹುಡುಗರು.. ಫೋಟೋ ಕ್ರೇಜ್.. ಬಿಂದಾಸ್ ಭೋಜನ.. ಮದುವಣಗಿತ್ತಿ ಸಿಂಗಾರಗೊಂಡ ಕಾಲೇಜ್.. ಮುಗಿಲು ಮುಟ್ಟಿದ ಸಂಭ್ರಮ.. ವಾವ್.. ಅದೇನ್ ಸಡಗರ.. ಅದೇನ್ ವಯ್ಯಾರ ಅಂತೀರಾ.. ಮಂಗಳೂರಿನ ಪಾಂಡೇಶ್ವರ ಬಳಿ ಇರುವ ಖಾಸಗಿ ಕಾಲೇಜ್ನಲ್ಲಿ ಓಣಂ ಹಬ್ಬದ ಜೋಶ್ ಸಖತ್ತಾಗಿಯೇ ಇತ್ತು. ಮಂಗಳೂರು ಫಿಸಿಯೋಥೆರಪಿ ಇನ್ಸ್ಟಿಟ್ಯೂಟ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇರಳ ಸಂಪ್ರದಾಯ ಉಡುಗೆಯಲ್ಲಿ ಭರ್ಜರಿಯಾಗಿಯೇ ರೆಡಿ ಆಗಿದ್ರು. ಮೊದಲಿಗೆ ಮಹಾಬಲಿಯ ಪಾತ್ರದಾರಿಯನ್ನ ಮೆರವಣಿಗೆ ಮೂಲಕ ಕಾಲೇಜು ಆವರಣಕ್ಕೆ ಕರೆತಂದು ಈ ಓಣಂ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.