Tumakuru: ಚಲಿಸುತ್ತಿದ್ದ ರೈಲಿನಲ್ಲಿ ಸಿಗರೇಟ್ ಸೇದಿ ಯುವಕನ ಪುಂಡಾಟ, ಪ್ರಶ್ನಿಸಿದ್ರೆ ಆವಾಜ್‌

ಚಲಿಸುತ್ತಿದ್ದ ರೈಲಿನಲ್ಲಿ ಯುವಕನೋರ್ವ ಪುಂಡಾಟ ಮಾಡಿದ್ದಾನೆ. ಚಲಿಸುವ ರೈಲಿನಲ್ಲೇ ಸಿಗರೇಟ್ ಸೇದಿದ್ದಾನೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡಿದ್ದಕ್ಕೆ ಅವರಿಗೇ ಅವಾಜ್ ಹಾಕಿದ್ದಾನೆ. ಬೆಂಗಳೂರಿನಿಂದ ಬೆಳಗಾವಿ ಕಡೆಗೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದ್ದು, ಯುವಕನ ಪುಂಡಾಟದ ವಿಡಿಯೋ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆಯಾಗಿದೆ.