ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಆನಂದಪುರ ಧಾಮಕ್ಕೆ ಆಗಮಿಸಿ ಧಾರ್ಮಿಕ ಕೇಂದ್ರದೊಳಗಿನ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಆನಂದಪುರ ಧಾಮವು ಅಶೋಕನಗರ ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ ಮತ್ತು ಭೋಪಾಲ್‌ನಿಂದ 215 ಕಿ.ಮೀ ದೂರದಲ್ಲಿರುವ ಇಸಾಘರ್ ತಹಸಿಲ್‌ನ ಆನಂದಪುರ ಗ್ರಾಮದಲ್ಲಿದೆ. ಈ ವರ್ಷ ಪ್ರಧಾನಿ ಮೋದಿ ಮಧ್ಯಪ್ರದೇಶಕ್ಕೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. ಫೆಬ್ರವರಿ 23 ರಂದು ಛತ್ತರ್‌ಪುರ ಜಿಲ್ಲೆಯ ಬಾಗೇಶ್ವರ ಧಾಮಕ್ಕೆ ಭೇಟಿ ನೀಡಿದ್ದ ಅವರು ಮರುದಿನ ರಾಜ್ಯ ರಾಜಧಾನಿ ಭೋಪಾಲ್‌ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಉದ್ಘಾಟಿಸಿದ್ದರು.