ಲೈವ್‌ ಕಾಮೆಂಟರಿಯಲ್ಲಿ ಪಾಕ್ ಆಟಗಾರರ ಮಾನ ಕಳೆದ ವಾಸೀಂ ಅಕ್ರಮ್

ಅಫ್ರಿದಿ ಫೀಲ್ಡಿಂಗ್ ನೋಡಿ ವೀಕ್ಷಕ ವಿವರಣೆ ನೀಡುತ್ತಿದ್ದ ವಾಸಿಂ ಅಕ್ರಮ್ ಹಣೆ ಹಿಡಿದುಕೊಂಡರು. ಈ ವೇಳೆ ಮಾತನಾಡಿದ ಅಕ್ರಮ್, ‘ನಾವು ನಮ್ಮ ತಂಡದ ಫೀಲ್ಡರ್‌ಗಳನ್ನು ನಂಬಲು ಸಾಧ್ಯವಿಲ್ಲ. ತಂಡದ ಕಳಪೆ ಪ್ರದರ್ಶನಕ್ಕೆ ಹಲವು ಕಾರಣಗಳಲ್ಲಿ ಇದು ಕೂಡ ಒಂದು. ಪ್ರತಿ ಬಾರಿಯೂ ನಮ್ಮ ಫೀಲ್ಡರ್​ಗಳು ಕ್ಯಾಚನ್ನು ಕೈಚೆಲ್ಲಿದ್ದಾಗ ಕ್ಷಮಿಸಿ, ಚೆಂಡನ್ನು ನೋಡಲಿಲ್ಲ ಎಂದು ಹೇಳುವುದನ್ನು ಕೇಳಿ ಕೇಳಿ ಸಾಕಾಗಿದೆ ಎಂದಿದ್ದಾರೆ.