ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ? ಕಪ್ಪುಗೊಂಬೆ, ನಿಂಬೆ ಹಣ್ಣು, ಕಾಯಿ ಪತ್ತೆ

ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ ನಡೆದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಕಪ್ಪು ಗೊಂಬೆ, ನಿಂಬೆ ಹಣ್ಣು, ಕುಂಕುಮ, ಕಾಯಿ ಇತರೆ ವಸ್ತುಗಳು ಪತ್ತೆಯಾಗಿವೆ. ಕೆಲವು ಪೊಲೀಸರು ಹೇಳುವಂತೆ ಈ ವಸ್ತುಗಳ ಬಂಡಲ್‌ಗಳು ಪಾರಂಪರಿಕ ಕಟ್ಟಡದ ಎರಡು ಬದಿಗಳಲ್ಲಿ ಪತ್ತೆಯಾಗಿವೆ . ಕಳೆದ ಕೆಲವು ದಿನಗಳಿಂದ ಅಲ್ಲಿ ಇರಿಸಲಾಗಿತ್ತು. ಆದರೆ, ಅವು ಮಾಟಮಂತ್ರಕ್ಕೆ ಸಂಬಂಧಿಸಿರುವುದರಿಂದ, ಯಾರೂ ಅವುಗಳನ್ನು ತೆಗೆದುಹಾಕಲು ಧೈರ್ಯ ಮಾಡಲಿಲ್ಲ. ಜನನಿಬಿಡ ಪಾದಚಾರಿ ಮಾರ್ಗಗಳಲ್ಲಿ ಇದು ಇದ್ದು ಅದನ್ನು ದಾಟಿ ಹೋಗಲು ಜನರು ಕಷ್ಟಪಡುತ್ತಿರುವುದು ಕಂಡುಬಂತು.