ಮೂಲಗಳ ಪ್ರಕಾರ, ಪ್ರತಿಮಾ ಅವರು ಗಣಿ ಮತ್ತು ಕ್ವಾರಿಗಳ ಮೇಲೆ ರೇಡ್ ನಡೆಸಲು ಹೊರಟಾಗ ಕಿರಣ್ ಆ ಸುದ್ದಿಯನ್ನು ಗಣಿ ಮಾಲೀಕರಿಗೆ ತಲುಪಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಅದು ಬಿಡಿ, ಹಂತಕ ಯಾರೇ ಆಗಿದ್ದರೂ ಪೊಲೀಸರು ಅವನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ, ಆದರೆ ಬೆಂಗಳೂರು ನಗರದಲ್ಲಿ ಹೀಗೆ ಒಬ್ಬ ಅಧಿಕಾರಿಯ ಹತ್ಯೆಯಾಗಿರುವುದು ಜನರನ್ನು ಬೆಚ್ಚಿ ಬೀಳಿಸಿದೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಹಲವು ಸಂದೇಹಗಳನ್ನು ಸೃಷ್ಟಿಸಿದೆ