ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಸೆಂಬ್ಲಿ ಚುನಾವಣೆ ಸೋತ ಬಳಿಕ ಈಗ ಏನ್ಮಾಡ್ತಿದಾರೆ ನೋಡಿ? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಎಲ್ಲೂ ಕಾಣಿಸಿಕೊಳ್ಳದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಮುಖಂಡರ ವಿರುದ್ದ ಬೇಸರಗೊಂಡಿದ್ದಾರೆ ಅನ್ನೋ ವಿಚಾರವೊಂದು ಬಹಿರಂಗ ಗೊಂಡಿದೆ. ಕಳೆದ ನಾಲ್ಕು ತಿಂಗಳಿನಿಂದ ರಾಜಕೀಯ ಕೃಷಿ ಬಿಟ್ಟು, ಒಬ್ಬ ಸಾಮಾನ್ಯ ರೈತನಾಗಿ ವ್ಯವಸಾಯ ಮಾಡುತ್ತಾ ಪ್ರಕೃತಿ ಮಧ್ಯದಲ್ಲಿ ಕಾಲ ಕಳೆಯುತ್ತಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ತೋಟದಲ್ಲಿ ವ್ಯವಸಾಯ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ.