ನಟಿ ಜಾನ್ವಿ ಕಪೂರ್ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಸದಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಅವರು ಈಗ ಅಚ್ಚುಕಟ್ಟಾಗಿ ಸೀರೆ ಧರಿಸಿ ದೇವರ ಸನ್ನಿಧಿಗೆ ಬಂದಿದ್ದಾರೆ. ಹೊಸ ವರ್ಷದ ಆರಂಭದಲ್ಲೇ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸುವ ಮೂಲಕ ಅವರು ಸುದ್ದಿ ಆಗಿದ್ದಾರೆ. ದೇವಾಲಯದ ಆವರಣದಲ್ಲಿ ಜಾನ್ವಿ ಕಪೂರ್ ಅವರು ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಬಾಲಿವುಡ್ನಲ್ಲಿ ಫೇಮಸ್ ಆಗಿರುವ ಜಾನ್ವಿ ಕಪೂರ್ ಅವರು ‘ದೇವರ’ ಸಿನಿಮಾ ಮೂಲಕ ಟಾಲಿವುಡ್ಗೂ ಎಂಟ್ರಿ ನೀಡುತ್ತಿದ್ದಾರೆ. ಆ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಜನವರಿ 8ರಂದು ಬಿಡುಗಡೆ ಆಗಲಿದೆ. ‘ದೇವರ’ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಜೊತೆ ಜಾನ್ವಿ ಕಪೂರ್ ತೆರೆ ಹಂಚಿಕೊಳ್ಳುತ್ತಿದ್ದಾರೆ.