14 ತಿಂಗಳು ಕಾಲ ಚೆನ್ನಾಗಿ ನಡೆದಿದ್ದ ಸರ್ಕಾರವನ್ನು ಬೀಳಿಸಿದ್ದು ಯಡಿಯೂರಪ್ಪ ಎಂದು ಸಿದ್ದರಾಮಯ್ಯ ಗಟ್ಟಿಧ್ವನಿಯಲ್ಲಿ ಹೇಳಿದರು. ಕುಮಾರಸ್ವಾಮಿ ಮತ್ತು ದೇವೇಗೌಡ ಅವರಿಗೆ ಕೊಂಚವಾದರೂ ಆತ್ಮಗೌರವ ಇದ್ದಿದ್ದರೆ ಬಿಜೆಪಿ ಮೈತ್ರಿ ಬೆಳೆಸುತ್ತಿರಲಿಲ್ಲ. ಆದರೆ ಹಿಂದಿನದೆಲ್ಲವನ್ನು ಮರೆತು ತಾವು ಮತ್ತು ಬಿಜೆಪಿ ನಾಯಕರು ಭಾಯಿ ಭಾಯಿ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕುಹುಕವಾಡಿದರು.