ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಂದು (ಜೂನ್ 09) ರಾಷ್ಟ್ರಪತಿ ಭವನದಲ್ಲಿ ದೇಶ-ವಿದೇಶದ ಅನೇಕ ಗಣ್ಯರ ಎದುರಿನಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆದಿದೆ. ವಿವಿಧ ದೇಶಗಳ ಪ್ರಮುಖರು ಇದರಲ್ಲಿ ಭಾಗಿ ಆಗಿದ್ದಾರೆ. ಅಲ್ಲದೇ, ಸಿನಿಮಾ ಕ್ಷೇತ್ರದ ಅನೇಕ ಗಣ್ಯರು ಕೂಡ ಪಾಲ್ಗೊಂಡಿದ್ದಾರೆ. ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮೋದಿಯವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿದ್ದಾರೆ. ಪತ್ನಿ ಲತಾ ಜೊತೆ ಆಗಮಿಸಿದ್ದ ಅವರು ಬಹಳ ಲವಲವಿಕೆಯಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ. ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುವ ರಜನಿಕಾಂತ್ ಅವರ ರಿಯಲ್ ಲೈಫ್ನಲ್ಲಿ ತುಂಬ ಸರಳ ವ್ಯಕ್ತಿ. ಇಂದು ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೂ ರಜನಿಕಾಂತ್ ಅವರು ಸಿಂಪಲ್ ಆಗಿ ಬಂದಿದ್ದಾರೆ. ಆದರೆ ಅವರ ಎಂಟ್ರಿ ಗ್ರ್ಯಾಂಡ್ ಆಗಿತ್ತು. ರಾಜ್ಕುಮಾರ್ ಹಿರಾನಿ, ವಿಕ್ರಾಂತ್ ಮಾಸಿ ಮುಂತಾದ ಸೆಲೆಬ್ರಿಟಿಗಳು ಕೂಡ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿದ್ದಾರೆ.