‘ಭಾಗ್ಯಶ್ರೀ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ’; ಪತಿ ಭರತ್ ಬೇಸರ

ಧಾರಾವಾಹಿ ನಟಿ ಭಾಗ್ಯಶ್ರೀ ಅವರು ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರ ಪತಿ, ನಿರ್ದೇಶಕ ಭರತ್ ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ‘ಭಾಗ್ಯಶ್ರೀ ಟಾರ್ಗೆಟ್ ಆಗುತ್ತಿದ್ದಾರೆ ಅನಿಸುತ್ತಿದೆ. ಎರಡು ಕಾರಣಕ್ಕೆ ಟಾರ್ಗೆಟ್ ಮಾಡಲಾಗುತ್ತದೆ. ಸ್ಟ್ರಾಂಗ್ ಎನ್ನುವ ಕಾರಣಕ್ಕೆ ಹೊರಗಿಡಬಹುದು ಅಥವಾ ನಮ್ಮ ಜೊತೆ ಬೆರೆಯುತ್ತಿಲ್ಲ ಎನ್ನುವ ಕಾರಣಕ್ಕೆ ಹೊರಗೆ ಇಡಬಹುದು. ಇವರು ಯಾವ ಕಾರಣಕ್ಕೆ ಹೊರಗಿಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಆದರೆ, ಅವರು ಸ್ಟ್ರಾಂಗ್ ಆಗಿದ್ದಾರೆ’ ಎಂದಿದ್ದಾರೆ ಭಾಗ್ಯಶ್ರೀ ಪತಿ. ಬಿಗ್ ಬಾಸ್ ಎಪಿಸೋಡ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.