‘ಈ ಚಿತ್ರಕ್ಕೆ ರವಿಚಂದ್ರನ್ ವಿಲನ್ ಆ್ಯಂಡ್ ಹೀರೋ ಎರಡೂ ಹೌದು’; ದಿಗಂತ್

‘ಜಡ್ಜ್ಮೆಂಟ್ ಡೇ’ ಸಿನಿಮಾದಲ್ಲಿ ದಿಗಂತ್, ರವಿಚಂದ್ರನ್, ಧನ್ಯಾ ರಾಮ್ಕುಮಾರ್ ಮೊದಲಾದವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಹಲವು ವಿಚಾರಗಳ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಸಿನಿಮಾ ಅಂದಮೇಲೆ ಸಾಮಾನ್ಯವಾಗಿ ವಿಲನ್ ಇರುತ್ತಾರೆ. ಈ ಚಿತ್ರದಲ್ಲಿ ವಿಲನ್ ಯಾರು ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ದಿಗಂತ್ ಉತ್ತರ ನೀಡಿದ್ದಾರೆ. ‘ಈ ಚಿತ್ರದಲ್ಲಿ ವಿಲನ್ ಆ್ಯಂಡ್ ಹೀರೋ ಎರಡೂ ಅವರೇ’ ಎಂದಿದ್ದಾರೆ ದಿಗಂತ್.