ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಬಿದ್ದ ಎತ್ತುಗಳಿಗೆ ಚಿತ್ರಹಿಂಸೆ

ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಬಿದ್ದ ಎತ್ತುಗಳಿಗೆ ಚಿತ್ರಹಿಂಸೆ ನೀಡಿದ ಅಮಾನವೀಯ ಕೃತ್ಯ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ. ನಾಗರಪಂಚಮಿ ನಿಮಿತ್ತ ಹುಕ್ಕೇರಿ ಪಟ್ಟಣದ ಸಿರಿಯಾಳ ಸೃಷ್ಟಿ ಕಮೀಟಿ ಹುಕ್ಕೇರಿ - ಅರ್ಜುನವಾಡ ರಸ್ತೆಯಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.