ಡಾಸನ್ 3000 ದಿನಗಳ ನಂತರ ಅಂದರೆ 8 ವರ್ಷಗಳ ನಂತರ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದು, ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಲಿಯಾಮ್ ಡಾಸನ್ ತಮ್ಮ 7ನೇ ಎಸೆತದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಉರುಳಿಸಿದ್ದಾರೆ. 58 ರನ್ ಬಾರಿಸಿ ಅಪಾಯಕಾರಿಯಾಗಿ ಕಾಣುತ್ತಿದ್ದ ಜೈಸ್ವಾಲ್ರನ್ನು ಪೆವಿಲಿಯನ್ಗಟ್ಟುವಲ್ಲಿ ಡಾಸನ್ ಯಶಸ್ವಿಯಾದರು.