Bng Shivanna Cc 3

ರಾಜ್ಯದ ಹೆಮ್ಮೆಯ ನಂದಿನಿ ಉತ್ಪನ್ನಗಳಿಗೆ ನಟ ಶಿವರಾಜ್​ಕುಮಾರ್​ ರಾಯಬಾರಿಯಾಗಿದ್ದಾರೆ. ಕೆಎಂಎಫ್​ ಮನವಿಗೆ ಸ್ಪಂದಿಸಿ ರಾಯಭಾರಿಯಾಗಲು ಶಿವಣ್ಣ ಒಪ್ಪಿದ್ದು, KMF​ ಅಧ್ಯಕ್ಷ ಭೀಮಾನಾಯ್ಕ್, ಎಂಡಿ ಜಗದೀಶ್​ ಮನವಿಗೆ ಸ್ಪಂದಿಸಿ ನಂದಿನಿಗೆ ಹೆಗಲು ಕೊಟ್ಟಿದ್ದಾರೆ. TV9 ಜೊತೆ ಮಾತನಾಡಿದ ಶಿವಣ್ಣ ನಂದಿನಿ ಹಾಲಿನ ರಾಯಬಾರಿ‌ಯಾಗಿದ್ದು ತುಂಬಾ ಖುಷಿಯಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ನಂದಿನಿ ಬ್ರ್ಯಾಂಡ್​ಗೆ ಯಾವುದೇ ಸಂಭಾವನೆ ಪಡೆಯದ ವಿಚಾರವಾಗಿ ಮಾತನಾಡಿದ ಅವರು, ಇದು ನಮ್ಮ ಸರ್ಕಾರ ಹಾಗೂ ನಮ್ಮ ಪ್ರಾಡೆಕ್ಟ್ ಆಗಿದ್ದು, ನಮ್ಮ ರೈತರಿಗೋಸ್ಕರ ಯಾವಾಗ್ಲು ಜೊತೆಯಲ್ಲಿರುತ್ತೇನೆ ಎಂದು ತಿಳಿಸಿದ್ದಾರೆ.