‘ಪ್ರೋಮೋ ಮತ್ತು ಸಿನಿಮಾಗೆ ಸೇರಿ ರಮ್ಯಾ ನಟಿಸಿದ್ದರು, ಆದರೆ..’: ಅಸಲಿ ವಿಷಯ ತಿಳಿಸಿದ ಹಾಸ್ಟೆಲ್​ ಹುಡುಗರು

‘ರಮ್ಯಾ ಅವರು ಪ್ರೋಮೋ ಮತ್ತು ಸಿನಿಮಾಗೆ ಖುಷಿಯಿಂದಲೇ ನಟಿಸಿದ್ದರು. ಅವರ ಬಗ್ಗೆ ನಮಗೆ ತುಂಬ ಗೌರವ ಇದೆ. ಅವರು ಲೇಡಿ ಸೂಪರ್ ಸ್ಟಾರ್​. ಆದರೆ ಸ್ಟೇ ತಂದಿದ್ದು ತಂಬಾ ಬೇಜಾರು ಆಯ್ತು. ಎರಡೂವರೆ ವರ್ಷ ಪ್ರಮೋಷನ್​ ಮಾಡಿ ಕೊನೇ ಹಂತದಲ್ಲಿ ತೊಂದರೆ ಆಗುತ್ತಾ ಅಂತ ಭಯ ಆಗಿತ್ತು. ಆದರೆ ಕೋರ್ಟ್​ನಲ್ಲಿ ನ್ಯಾಯ ಸಿಕ್ಕಿದೆ’ ಎಂದು ನಿರ್ದೇಶಕ ನಿತಿನ್​ ಕೃಷ್ಣಮೂರ್ತಿ ಹೇಳಿದ್ದಾರೆ.