ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಪ್ರಧಾನಿ ಮೋದಿ ಹೆಚ್ಚು ಗಮನ; ಹರಿಸುತ್ತಿದ್ದಾರೆ: WITT ಶೃಂಗಸಭೆಯಲ್ಲಿ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್

ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT) ಶೃಂಗಸಭೆಯಲ್ಲಿ ಟಿವಿ9 ನೆಟ್​ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಮಾತನಾಡಿದ್ದು, 2047ರ ವೇಳೆಗೆ "ವಿಕಸಿತ ಭಾರತ"ದ ಗುರಿಯನ್ನು ಸಾಧಿಸಲು ಭಾರತದ ಯುವಜನರು, ಮಹಿಳೆಯರು ಮತ್ತು ವಲಸಿಗರ ಮೇಲೆ ಪ್ರಧಾನಿ ಮೋದಿ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದಿದ್ದಾರೆ. ಪ್ರಧಾನಿ ಮೋದಿಯವರನ್ನು ವಿಶ್ವದ ಅತ್ಯಂತ ಪ್ರಭಾವಿ ಮತ್ತು ಅತ್ಯಂತ ಮೆಚ್ಚುಗೆ ಪಡೆದ ರಾಜನೀತಿಜ್ಞ ಎಂದು ಬರುಣ್ ದಾಸ್ ಬಣ್ಣಿಸಿದ್ದಾರೆ.