ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ನೀರಿನ ಸಮಸ್ಯೆಗಳ ಬಗ್ಗೆ ದೂರುಗಳ ಮಾಲೆಗಳನ್ನು ಕಟ್ಟಿಕೊಂಡು ತೆವಳುತ್ತಾ ಸರ್ಕಾರಿ ಕಚೇರಿಗೆ ಬಂದಿದ್ದಾರೆ. ಬಿಶನ್‌ಖೇಡಿ ನಿವಾಸಿ ಬಜರಂಗಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಗ್ರಾಮದಲ್ಲಿ ನೀರು ಸಿಗುವುದು ಒಂದು ದೊಡ್ಡ ಸವಾಲಾಗಿರುವುದರಿಂದ ತಾನು ಈ ಅಸಾಮಾನ್ಯ ಪ್ಲಾನ್ ಮಾಡುವುದಾಗಿ ಹೇಳಿದ್ದಾರೆ. ನೀರಿನ ಕೊರತೆ ಎಷ್ಟು ತೀವ್ರವಾಗಿದೆಯೆಂದರೆ, ಜನರು, ವಿಶೇಷವಾಗಿ ಮಹಿಳೆಯರು, ಪ್ರಕೃತಿಯ ಕರೆಗಾಗಿ ಸಾಕಷ್ಟು ನೀರನ್ನು ಹೊತ್ತುಕೊಂಡು ಹೋಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.