ನದಿಪಾತ್ರದಲ್ಲಿ ಪೂಜೆಗೆಂದು ಬರುವ ಜನ ಪೂಜಾ ಸಾಮಗ್ರಿಗಳ ತ್ಯಾಜ್ಯವನ್ನು ಅಲ್ಲೇ ನಿಟ್ಟುಹೋಗುತ್ತಾರೆ. ಕೆಲವರು ಸ್ನಾನ ಮತ್ತು ಬಟ್ಟೆ ಒಗೆದುಕೊಳ್ಳಲೂ ಬರುತ್ತಾರೆ. ಒಂದು ವಾರದ ಅವಧಿಯಲ್ಲಿ ದೊಡ್ಡ ಪ್ರಮಾಣದ ತ್ಯಾಜ್ಯ ನದಿಪಾತ್ರದಲ್ಲಿ ಗುಡ್ಡೆಯಾಗುತ್ತಿದೆ. ಹರಿಹರದ ನಾಗರಿಕರು ಪ್ರತಿವಾರ ಕಸವನ್ನು ಸ್ಚಚ್ಛ ಮಾಡುತ್ತಿದ್ದಾರೆ.