‘ಮತ್ತೆ ಮದುವೆ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದ್ದಾರೆ. ಪವಿತ್ರಾ ಲೋಕೇಶ್ ಹಾಗೂ ನರೇಶ್ ಜೀವನದ ವಿಚಾರಗಳನ್ನೇ ಸಿನಿಮಾದಲ್ಲಿ ಹೇಳಲಾಗಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಚಿತ್ರಕ್ಕೆ ನರೇಶ್ ಅವರೇ ಡಬ್ ಮಾಡಿದ್ದಾರೆ. ‘ಈ ಸಿನಿಮಾದಲ್ಲಿ ನಾನು ಮಾಡಿದ ಪಾತ್ರ ಹಾಗಿದೆ. ಸಿನಿಮಾದಲ್ಲೂ ನಾನು ಪರಭಾಷೆಯವನು. ಬೇರೆ ಭಾಷೆಯವರು ಎಂದಾಗ ಪರ್ಫೆಕ್ಟ್ ಕನ್ನಡ ಬರಲ್ಲ. ನನಗೂ ಅಷ್ಟೇ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತದೆ. ಪಾತ್ರಕ್ಕೆ ಹೊಂದುತ್ತದೆ ಎನ್ನುವ ಕಾರಣಕ್ಕೆ ನಾನೇ ಡಬ್ ಮಾಡಿದೆ’ ಎಂದಿದ್ದಾರೆ ನರೇಶ್. ಏಪ್ರಿಲ್ 26ರಂದು ‘ಮತ್ತೆ ಮದುವೆ’ ರಿಲೀಸ್ ಆಗುತ್ತಿದೆ.