ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಎಸ್ ಎಂ ಕೃಷ್ಣ ಮತ್ತು ಚಂದ್ರೇಗೌಡರನ್ನು ಬಿಟ್ಟರೆ ಎಲ್ಲ 4 ಸದನಗಳಿಗೆ ಆಯ್ಕೆಯಾದವರು ಬೇರೆ ಯಾರೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ, ಸದನದಲ್ಲಿ ಹಾಜರಿದ್ದ ಸದಸ್ಯರೊಬ್ಬರು ಈಗ ಮೇಘಾಲಯದ ರಾಜ್ಯಪಾಲರಾಗಿರುವ ಸಿಹೆಚ್ ವಿಜಯಶಂಕರ ಸಹ ಎಲ್ಲ 5 ಸದನಗಳಿಗೆ ಆಯ್ಕೆಯಾಗಿದ್ದರು ಎನ್ನುತ್ತಾರೆ. ಅವರು ರಾಜ್ಯಸಭೆಗೆ ಆಯ್ಕೆಯಾದಂತಿಲ್ಲ ಎನ್ನುವ ಸಿದ್ದರಾಮಯ್ಯ ತಪ್ಪು ಹೇಳಿದ್ದರೆ ತಿದ್ದಿಕೊಳ್ಳಲು ತಯಾರಿದ್ದೇನೆ ಅನ್ನುತ್ತಾರೆ.