ಟೀಮ್ ಇಂಡಿಯ ಗೆಲುವಿಗೆ ಯಾವುದೇ ವಿಘ್ನ ಎದುರಾಗದ ಹಾಗೆ ಅಭಿಮಾನಿಗಳು ವಿಘ್ನ ನಿವಾರಕ ವಿನಾಯಕನಿಗೆ ಪೂಜೆ ಸಲ್ಲಿಸಿದ್ದಾರೆ. ಭಾರತ ಪಂದ್ಯವನ್ನು ಗೆದ್ದು ಗೆಲುವಿನ ಲೀಡನ್ನು 8-0 ಗೆ ಏರಿಸಲಿದೆ ಎಂಬ ವಿಶ್ವಾಸ ಇವರೆಲ್ಲರಲ್ಲೂ ಇದೆ. ಈ ಅಭಿಮಾನಿಗಳ ನೆಚ್ಚಿನ ಬ್ಯಾಟರ್ ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ. ಇಬ್ಬರೂ ಶತಕ ಬಾರಿಸಲಿದ್ದಾರೆಂದು ಅವರು ಹೇಳುತ್ತಾರೆ.