‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಆಟದ ತೀವ್ರತೆ ಹೆಚ್ಚಾಗುತ್ತಿದೆ. ಒಬ್ಬರ ಬಗ್ಗೆ ಇನ್ನೊಬ್ಬರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಎಲ್ಲರ ವ್ಯಕ್ತಿತ್ವ ಏನು ಎಂಬುದು ಬಹುತೇಕ ಗೊತ್ತಾಗಿದೆ. ಚೈತ್ರಾ ಕುಂದಾಪುರ ಮತ್ತು ತ್ರಿವಿಕ್ರಮ್ ಅವರ ನಡುವಿನ ನಂಟಿನ ಬಗ್ಗೆ ಐಶ್ವರ್ಯಾ ಹಾಗೂ ಗೋಲ್ಡ್ ಸುರೇಶ್ ಅವರು ಮಾತನಾಡಿಕೊಂಡಿದ್ದಾರೆ.