ಭೂಕಬಳಿಕೆ ಆರೋಪದ ಬಗ್ಗೆ ಬೈಲಹೊಂಗಲ ವಿಭಾಗಾಧಿಕಾರಿ ಪ್ರಭಾವತಿ ಅವರನ್ನು ಕೇಳಿದಾಗ ತಾನು ಯಾವುದೇ ತಿದ್ದುಪಡಿಯನ್ನು ಮಾಡಿಲ್ಲ, ತಮ್ಮ ಕಚೇರಿಗೆ ಬಂದಿದ್ದ ಫೈಲನ್ನು 2023 ರಲ್ಲೇ ಜಿಲ್ಲಾಧಿಕಾರಿಯವರಿಗೆ ಕಳಿಸಿರುವುದಾಗಿ ಅವರು ಹೇಳುತ್ತಾರೆ. ಅಂದರೆ ಆಗ ಬೆಳಗಾವಿ ಡಿಸಿಯಾಗಿದ್ದ ನಿತೇಶ್ ಪಾಟೀಲ್ ರಾಜ್ಯಪಾಲರ ಹೆಸರಲ್ಲಿದ್ದ ಜಮೀನನ್ನು ಕಾನೂನುಬಾಹಿರವಾಗಿ ಪೋಡಿ ಮಾಡಿದ್ರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.