ಬಿ ದಯಾನಂದ, ಬೆಂಗಳೂರು ಪೊಲೀಸ್ ಕಮೀಶನರ್

ಈ ಚೇಷ್ಟೆಯನ್ನು ಕಿಡಿಗೇಡಿತನ ಅಂತ ಹೇಳಲಾಗಲ್ಲ, ಇದೊಂದು ದೊಡ್ಡ ಅಪರಾಧ. ಬೆದರಿಕೆಯ ಈಮೇಲ್ ಬಂದಿರುವ ಶಾಲೆಗಳಲ್ಲಿ ಓದುವ ಮಕ್ಕಳು ಮತ್ತು ಪೋಷಕರು ಅನುಭವಿಸುವ ಭೀತಿ ಮತ್ತು ಆತಂಕದ ಬಗ್ಗೆ ಯೋಚಸಿ ನೋಡಿ. ತಂದೆತಾಯಿಗಳಿಬ್ಬರೂ ಉದ್ಯೋಗಸ್ಥರಾಗಿದ್ದು ತಮ್ಮ ತಮ್ಮ ಕಚೇರಿಗಳಿಗೆ ಹೋಗಿದ್ದಾಗ ವಿಷಯ ಗೊತ್ತಾಗಿ ಬೆಂಗಳೂರಿನ ಟ್ರಾಫಿಕ್ ನಲ್ಲಿ ಆವರು ತಮ್ಮ ಮಗ/ಮಗಳು ಓದುವ ಶಾಲೆಗೆ ಆತಂಕದಲ್ಲಿ ಧಾವಿಸುವ ದೃಶ್ಯವನ್ನು ಕಲ್ಪಿಸಿಕೊಳ್ಳಿ. ನಮಗೂ ಹೆದರಿಕೆಯಾಗುತ್ತದೆ. ದುಷ್ಟರಿಗೆ ಭಾರೀ ಪ್ರಮಾಣದ ಶಿಕ್ಷೆಯಾಗಬೇಕು.