ಮಸ್ಕಿ ಕಾಂಗ್ರೆಸ್​ ಶಾಸಕನ ಪತ್ರ, ಸಹೋದರನಿಂದ ಮೊಲ ಬೇಟೆ, ಮೆರವಣಿಗೆ

ರಾಯಚೂರಿನ ಮಸ್ಕಿ ಕಾಂಗ್ರೆಸ್ ಶಾಸಕರ ಪುತ್ರ ಮತ್ತು ಸಹೋದರರು ಯುಗಾದಿ ಹಬ್ಬದ ಸಂದರ್ಭದಲ್ಲಿ ಮೊಲಗಳನ್ನು ಬೇಟೆಯಾಡಿ ಮೆರವಣಿಗೆ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋದಿಂದಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದ್ದು, ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.