ಅವಳಿ ಗಂಡು ಶಿಶುಗಳ ಅಂತ್ಯಸಂಸ್ಕಾರ ನಡೆಸಲು, ಮನೆ ಮಂದಿಗೆ ಅಸಹಾಯಕ ಪರಿಸ್ಥಿತಿ ಎದುರಾದಾಗ, ಸಮಾಜಸೇವಕ ನಿತ್ಯಾನಂದ ಒಳಕಾಡುವರು, ನೆರವಿಗೆ ಬಂದು ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದರು. ಬಾಗಲಕೋಟೆಯ ಹುಲಿಗಮ್ಮ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾದ ಹುಲಿಗಮ್ಮ ಅವಳಿ ಗಂಡು ಶಿಶುಗಳಿಗೆ ರವಿವಾರ ಜನ್ಮ ನೀಡಿದಳು.