‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ‘ಡೆವಿಲ್: ದಿ ಹೀರೋ’ ಸಿನಿಮಾದ ಕೆಲಸಗಳ ನಡುವೆ ಬಿಡುವು ಪಡೆದ ದುಬೈಗೆ ತೆರಳಿದ್ದಾರೆ. ಅಲ್ಲಿ ಅವರು ಪತ್ನಿ ವಿಜಯಲಕ್ಷ್ಮಿ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಹಾಗೂ ಆಪ್ತರು ವೆಡ್ಡಿಂಗ್ ಆ್ಯನಿವರ್ಸರಿಯ ಶುಭಾಶಯ ಕೋರಿದ್ದಾರೆ. ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಅವರು ಕೋಪ ಹೊರಹಾಕಿದ್ರಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ, ದರ್ಶನ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಕರ್ಮದ ಬಗ್ಗೆ ಮಾತಾಡಿರೋ ವೈರಲ್ ವಿಡಿಯೋವನ್ನು ಈಗ ಪವಿತ್ರಾ ಗೌಡ ಶೇರ್ ಮಾಡಿ ‘ಕರ್ಮ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಈ ವಿಡಿಯೋ ಮತ್ತು ಕ್ಯಾಪ್ಷನ್ನ ಸೀಕ್ರೆಟ್ ಏನು ಎಂಬ ಕುತೂಹಲ ಹುಟ್ಟುಕೊಂಡಿದೆ. ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಹಾಗೂ ವಿಜಯಲಕ್ಷ್ಮಿ ನಡುವೆ ವಾರ್ ಆಗಿತ್ತು. ಆ ಮುನಿಸು ಇನ್ನೂ ಕಡಿಮೆ ಆದಂತಿಲ್ಲ. ಇಂದು (ಮೇ 20) ವಿಜಯಲಕ್ಷ್ಮಿ ಅವರು ಇನ್ಸ್ಟಾಗ್ರಾಮ್ಲ್ಲಿ ಸ್ಟೋರಿ ಶೇರ್ ಮಾಡಿದ 1 ಗಂಟೆ ನಂತರ ಪವಿತ್ರಾ ಅವರು ಕರ್ಮದ ವಿಡಿಯೋ ಶೇರ್ ಮಾಡಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.