ತನಿಷಾ ಕುಪ್ಪಂಡ ಅವರ ಮೇಲೆ ಪ್ರತಾಪ್ಗೆ ಅನುಮಾನ ಬಂದಿದೆ. ತಮ್ಮ ಜೊತೆ ಚೆನ್ನಾಗಿ ಇರುವ ಅವರು ಇತರರ ಜೊತೆ ತಮ್ಮ ಬಗ್ಗೆ ಮಾತನಾಡುತ್ತಾರೆ ಎನ್ನುವ ಅನುಮಾನ ಮೂಡಿದೆ. ಈ ಬಗ್ಗೆ ಪ್ರತಾಪ್ ಅವರು ಓಪನ್ ಆಗಿ ಮಾತನಾಡಿದ್ದಾರೆ. ಇದರಿಂದ ತನಿಷಾ ಹಾಗೂ ಪ್ರತಾಪ್ ಮಧ್ಯೆ ಜಗಳ ಏರ್ಪಟ್ಟಿದೆ. ‘ನೀನು ಮಾಡಿರೋದು ಬೆನ್ನಿಗೆ ಚೂರಿ ಹಾಕುವ ಕೆಲಸ. ದೀದಿ ಎಂದು ಸ್ಥಾನ ಕೊಟ್ಟಮೇಲೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಎಲ್ಲವೂ ಇಲ್ಲಿಗೆ ಸ್ಟಾಪ್ ಆಗಲಿ’ ಎಂದಿದ್ದಾರೆ ತನಿಷಾ. ಈ ಮಾತು ಕೇಳಿ ಪ್ರತಾಪ್ಗೆ ಬೇಸರ ಆಗಿದೆ.