ಅಧ್ಯಕ್ಷನಾಗಿ ಮುಂದುವರಿಯುವ ಬಗ್ಗೆ ಖಚಿತವಾಗಿ ಹೇಳದ ವಿಜಯೇಂದ್ರ

ಕರ್ನಾಟಕ ಘಟಕದ ಬಿಜೆಪಿ ಅಧ್ಯಕ್ಷರಾಗಿ ನಿಮ್ಮನ್ನು ಮುಂದುವರಿಸುವ ವಿಶ್ವಾಸ ಇದೆಯೇ ಎಂದು ಕೇಳಿದ ಪ್ರಶ್ನೆಗೆ ವಿಷಣ್ಣನಾಗಿ ನಕ್ಕಂತೆ ಕಂಡ ವಿಜಯೇಂದ್ರ, ಪಕ್ಷದ ರಾಜ್ಯಾಧ್ಯಕ್ಷನಾಗಿ ಕಳೆದ ಒಂದೂಕಾಲು ವರ್ಷದಲ್ಲಿ ಬಹಳ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ, ರಾಜ್ಯದ ಎಲ್ಲ ವಿದ್ಯಮಾನಗಳನ್ನು ವರಿಷ್ಠರಿಗೆ ರವಾನಿಸುವ ಕೆಲಸ ಮಾಡಿದ್ದೇನೆ, ನಮ್ಮದು ರಾಷ್ಟ್ರೀಯ ಪಕ್ಷ, ಎಲ್ಲಾ ಜಿಲ್ಲಾಧ್ಯಕ್ಷರ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.