ನಗರದ ಪ್ರದೇಶದ ಜನರಿಗೆ ಕಂಬಳದ ಬಗ್ಗೆ ಹೆಚ್ಚು ಗೊತ್ತಿಲ್ಲ. ಪ್ರಾಯಶಃ ಇದೇ ಕಾರಣಕ್ಕೆ ಬೆಂಗಳೂರು ಕಂಬಳ ಆಯೋಜಕರು ಎರಡು ದಿನ ನಡೆಯುವ ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕ ಸಂಗ್ರಹಿಸುತ್ತಿಲ್ಲ. ಯಾರು ಬೇಕಾದರೂ ಅರಮನೆ ಮೈದಾನಕ್ಕೆ ತೆರಳಿ ಉಚಿತವಾಗಿ ಕಂಬಳ ನೋಡಿ ಆನಂದಿಸಬಹುದು. ಪ್ರೇಕ್ಷಕರು ಕೂತು ನೋಡಲು ಆಸನಗಳು ಮತ್ತು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.