ನಮ್ಮ ತೆರಿಗೆ ನಮ್ಮ ಹಕ್ಕು ಅಂತ ರಾಜ್ಯ ಸರ್ಕಾರ ಪ್ರದರ್ಶನ ಮಾಡಿದ್ದಕ್ಕೆ ಉತ್ತರ ಕೊಡಬೇಕು, ಮತ್ತು ತಾನು ಕಣ್ಣೀರು ಹಾಕಿದ್ಯಾಕೆ ಅನ್ನೋದಕ್ಕೂ ಯಡಿಯೂರಪ್ಪ ಉತ್ತರ ಕೊಡಬೇಕು ಎಂದು ಶಿವಕುಮಾರ್ ಹೇಳಿದರು. ಕಾಂಗ್ರೆಸ್ ಗೆ ವೋಟು ನೀಡಿದರೆ ಭಯೋತ್ಪಾದಕರಿಗೆ ನೀಡಿದಂತೆ ಅಂತ ಯಡಿಯೂರಪ್ಪ ಹೇಳಿದ್ದನ್ನು ನೀತಿ ಸಂಹಿತೆ ಅಡಿಯಲ್ಲಿ ಚುನಾವಣಾ ಆಯೋಗ ಗಮನಿಸುತ್ತದೆ ಎಂದು ಶಿವಕುಮಾರ್ ಹೇಳಿದರು.