‘ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ’: ಕಿಚ್ಚನ ಎದುರಲ್ಲೇ ಹೇಳಿದ ರಜತ್

ಚೈತ್ರಾ ಕುಂದಾಪುರ ಅವರ ಬಗ್ಗೆ ಬಹುತೇಕರಿಗೆ ಅಸಮಾಧಾನ ಇದೆ. ಈ ಬಗ್ಗೆ ಕಿಚ್ಚ ಸುದೀಪ್ ಎದುರಲ್ಲೇ ಚರ್ಚೆ ಆಗಿದೆ. ಬೇಕಂತಲೇ ಚೈತ್ರಾ ಕುಂದಾಪುರ ನಾಟಕ ಮಾಡುತ್ತಾರೆ ಎಂಬ ಅಭಿಪ್ರಾಯ ಅನೇಕರದ್ದು. ಡಿಸೆಂಬರ್​ 22ರ ಸಂಚಿಕೆಯಲ್ಲಿ ಕೂಡ ಇದೇ ವಿಷಯ ಚರ್ಚೆ ಆಗಲಿದೆ. ಅದರ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.