ಭರತ ನಾಟ್ಯ ಮಾಡುತ್ತಿದ್ದ ಮಕ್ಕಳ ಮೇಲೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ c ತೋರಿದ ಪ್ರಸಂಗ ಧಾರವಾಡದಲ್ಲಿ ನಡೆಯಿತು.ಅವತರ ಮಕ್ಕಳ ಮೇಲಿನ ಕಾಳಜಿ ಗಮನ ಸೆಳೆಯಿತು. ಕನಕದಾಸ ಜಯಂತಿ ಹಿನ್ನೆಲೆಯಲ್ಲಿ ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾಡಳಿತದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವೇದಿಕೆಯಲ್ಲಿ ಮಕ್ಕಳಿಂದ ಭರತ ನಾಟ್ಯ ನಡೆಯುತ್ತಿತ್ತು. ಮಕ್ಕಳು ನಾಟ್ಯ ಮಾಡುವಾಗ ಮಕ್ಕಳ ಕಿವಿಯೋಲೆ ಬಿಚ್ಚಿಬಿತ್ತು. ಕೂಡಲೇ ಅದನ್ನು ಗಮನಿಸಿದ ಜೋಶಿ, ಮಕ್ಕಳು ಕಿವಿಯೋಲೆ ತುಳಿಯಬಾರದೆಂಬ ಕಾಳಜಿಯಿಂದ ತಾವೇ ಎದ್ದು ಬಂದು ಓಲೆ ಎತ್ತಿಕೊಂಡರು. ಬಳಿಕ ವೇದಿಕೆ ಮೇಲಿದ್ದ ಮಹಿಳೆಯೊಬ್ಬರ ಕೈಗೆ ಅದನ್ನು ನೀಡಿದ್ದು ಅಲ್ಲಿದ್ದವರ ಗಮನ ಸೆಳೆಯಿತು.