ಕೆವೈಸಿ ಮಾಡಿಸದಿದ್ದರೆ ವಾಣಿಜ್ಯ ದರಕ್ಕೆ ಗೃಹ ಸಿಲಿಂಡ‌ರ್ ಅಂತೆ! ಹೌದಾ?

ಗ್ಯಾಸ್ ಸಂಪರ್ಕವುಳ್ಳವರು ಇ-ಕೆವೈಸಿ ಮಾಡಿಸಿದರೆ ಜನವರಿ 1ರಿಂದ ಸಹಾಯಧನ ಸಿಗಲಿದೆ, ಇ ಕೆವೈಸಿ ( e kyc) ಮಾಡಿಸದಿದ್ದರೆ ವಾಣಿಜ್ಯ ದರದಲ್ಲಿ 1,400 ರೂ.ಗಳಿಗೆ ಸಿಲಿಂಡ‌ರ್ (domestic lpg cylinder) ಪಡೆದುಕೊಳ್ಳಬೇಕಾದೀತು ಎಂಬ ಮೊಬೈಲ್ ಜಾಲತಾಣದಲ್ಲಿ ಸುಳ್ಳು ಸಂದೇಶವೊಂದು (rumor) ಕಳೆದೊಂದು ವಾರದಲ್ಲಿ (udupi) ಸಿಕ್ಕಾಪಟ್ಟೆ ಹರಿದಾಡಿದ್ದು, ಗೊಂದಲಕ್ಕೊಳಗಾದ ಜನರು ಗ್ಯಾಸ್ ಏಜೆನ್ಸಿಗಳ ಮುಂದೆ ಸರದಿ ಸಾಲಲ್ಲಿ ನಿಂತಿದ್ದಾರೆ.